ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಕ್ಷೇತ್ರದ
ಸರ್ವತೋಮುಖ ಬೆಳವಣಿಗೆಯ ಉದ್ದೇಶದೊಂದಿಗೆ 27.08.1924
ರಂದು ಮೈಸೂರು ಸಹಕಾರ ಪ್ರಚಾರಕ ಸಂಘ ಎಂಬ ಹೆಸರಿನಲ್ಲಿ ಸ್ಥಾಪನೆಯಾಯಿತು.
ಸ್ಥಾಪಕ ಅಧ್ಯಕ್ಷರಾಗಿ ರಾಜಕಾರ್ಯ ಪ್ರಸಕ್ತ ಎಂ.ವಿ. ಶಾಮರಾವ್
ರವರು ಮಾರ್ಗದರ್ಶನ ಮಾಡಿರುತ್ತಾರೆ.
ಸಹಕಾರ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು 1925
ರ ಜನವರಿಯಲ್ಲಿ ಮೈಸೂರು ಸಹಕಾರ ಪತ್ರಿಕೆ ಎಂಬ ಹೆಸರಿನ
ಮಾಸ ಪತ್ರಿಕೆಯನ್ನು ಆರಂಭಿಸಲಾಯಿತು. ಪತ್ರಿಕೆಯ ಆರಂಭಕ್ಕೆ ಅಂದಿನ ಮೈಸೂರು ರಾಜ್ಯದ
ಸಹಕಾರ ಸಂಘಗಳ ನಿಬಂಧಕರಾದ ಕೆ.ಎಚ್. ರಾಮಯ್ಯ ಅವರ ಮಾರ್ಗದರ್ಶನ
ಹಾಗೂ ಪ್ರೇರಣೆಯು ಕಾರಣವಾಗಿದೆ.
1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ
ಸಂಸ್ಥೆಯನ್ನು ಮೈಸೂರು ರಾಜ್ಯ ಸಹಕಾರ ಯೂನಿಯನ್ ಎಂದು
ಮರುನಾಮಕರಣ ಮಾಡಲಾಯಿತು.
27.04.1987 ರಂದು ಕರ್ನಾಟಕ ರಾಜ್ಯ ಸರ್ಕಾರ
ಆದೇಶವೊಂದನ್ನು ಹೊರಡಿಸಿ, ರಾಜ್ಯದ 4 ರಾಜ್ಯಮಟ್ಟದ ಸಹಕಾರ ಸಂಸ್ಥೆಗಳನ್ನು
ಒಗ್ಗೂಡಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.
ಎಂಬ ನೂತನ ಹೆಸರಿನೊಂದಿಗೆ ಹೊಸ ಸಂಸ್ಥೆಯನ್ನು ನೋಂದಣಿ ಮಾಡಿತು.
ಪ್ರಕಾಶನ ಮಂದಿರ
ಮುದ್ರಣಾಲಯ
ಸಹಕಾರ ಹೋಂ
ಸಹಕಾರ ಯೂನಿಯನ್
ಅಂದಿನಿಂದ ಮಹಾಮಂಡಳವು ತನ್ನ ಕಾರ್ಯಚಟುವಟಿಕೆಗಳನ್ನು ವೃದ್ಧಿಸಿಕೊಂಡು
ಹೆಚ್ಚು ಜನರನ್ನು ತಲುಪುತ್ತಾ ಸಹಕಾರಿ
ಚಳವಳಿಯ ಆರೋಗ್ಯಕರ ಬೆಳವಣಿಗೆಗೆ
ಶತಮಾನಕಾಲದಿಂದ ಶ್ರಮಿಸುತ್ತಾ ಬಂದಿದೆ.
ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಮೂಲಕ ಸಹಕಾರಿ ಸಂಘಗಳ
ಸಮಗ್ರ ಅಭಿವೃದ್ಧಿಗೆ ಮಹಾಮಂಡಳವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
1924 ರಲ್ಲಿ ಮೈಸೂರು ಸಹಕಾರ ಪ್ರಚಾರಕ ಸಂಘವಾಗಿ ಆರಂಭವಾಗಿ,
1956 ರಲ್ಲಿ ಮೈಸೂರು ರಾಜ್ಯ ಸಹಕಾರ ಯೂನಿಯನ್ ಆಗಿ,
1987 ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ
ಆಗಿ ರೂಪಾಂತರಗೊಂಡಿದೆ. ಸಹಕಾರಿ ಚಳವಳಿಯ ಬೆಳವಣಿಗೆಗೆ ಶತಮಾನದ ಸೇವೆ.