ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಕಾರ್ಯದರ್ಶಿ

Secretary Photo KSCF

ಶ್ರೀಮತಿ ಅಶ್ವಿನಿ ವೈ. ಟಿ

Mrs. Ashwini Y. T

ಕಾರ್ಯದರ್ಶಿ | Secretary
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು
Karnataka State Cooperative Federation Ltd., Bengaluru

ಶ್ರೀಮತಿ ಅಶ್ವಿನಿ ವೈ. ಟಿ ಮೈಸೂರಿನಲ್ಲಿ ಜನಿಸಿದ್ದು, ತುಮಕೂರು ಜಿಲ್ಲೆಯ ಮೂಲದವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದ ಅವರು, ಉನ್ನತ ಶಿಕ್ಷಣವನ್ನು ಹಾಸನದಲ್ಲಿ ಪಡೆದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯಾಧಾರಿತ ಬರವಣಿಗೆ, ಆಡಳಿತ ಹಾಗೂ ನಿರ್ವಹಣಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಇವರು, ಖಾಸಗಿ ಸಂಸ್ಥೆಗಳಾದ ಹ್ಯೂಲೆಟ್ ಪ್ಯಾಕರ್ಡ್ (HP) ಹಾಗೂ ಡಿ ಎಕ್ಸ್ ಸಿ ಟೆಕ್ನಾಲಜಿ (DXC Technology) ಗಳಲ್ಲಿ 13 ವರ್ಷಗಳಿಗೂ ಮೀರಿದ ಸಮಯ ದಲ್ಲಿ, ವ್ಯವಸ್ಥಾಪಕರಾಗಿ (Manager) ಹಾಗೂ ಐಟಿ ಮೂಲಸೌಕರ್ಯ (IT Infrastructure) ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ವೃತ್ತಿಪರ ಅನುಭವವನ್ನು ಸಂಪಾದಿಸಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಸ್ಪರ್ಧಾತ್ಮಕ ಪರೀಕ್ಷೆಯನ್ನು (KAS), 1998 ರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ, 2019 ರಲ್ಲಿ ಸಹಕಾರ ಇಲಾಖೆಯಲ್ಲಿ ಸಹಾಯಕ ನಿಬಂಧಕರಾಗಿ (Assistant Registrar) ಸೇರಿ, ಸಾರ್ವಜನಿಕ ಸೇವೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸುತ್ತಿದ್ದಾರೆ.

ಪ್ರಸ್ತುತ,‌ ಅವರು ಸಹಕಾರ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಉಪ ನಿಬಂಧಕರಾಗಿ (Deputy Registrar) ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ ಸಹಕಾರ ಸಂಘಗಳ ನಿಬಂಧಕರ (RCS) ಪತ್ರಾಂಕಿತ ಸಹಾಯಕರಾಗಿ (GA) ಸೇವೆ ಸಲ್ಲಿಸುತ್ತಿದ್ದಾರೆ.ಇದರ ಜೊತೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆಯನ್ನು ಸಹ ನಿರ್ವಹಿಸುತ್ತಿದ್ದಾರೆ.

ಕಾರ್ಯದರ್ಶಿ ವಿವರ (PDF)