ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಅಖಿಲ ಭಾರತ ಸಹಕಾರ ಸಪ್ತಾಹ

Cooperative Week
67 ವರ್ಷಗಳ ಆಚರಣೆ

ಸಹಕಾರ ಚಳುವಳಿಯ ಮಹತ್ವ ಮತ್ತು ಸಾಧನೆ

ರಾಷ್ಟ್ರದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರಿಗೆ ಸಹಕಾರ ತತ್ವದಲ್ಲಿ ಅಪಾರ ವಿಶ್ವಾಸ ನಂಬಿಕೆ ಇದ್ದಿತು. ಚಳುವಳಿಯ ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ, ಬೆಂಬಲ ನೀಡಿದರು.

ಇದರ ಪರಿಣಾಮವಾಗಿ ಸಹಕಾರ ಚಳುವಳಿ ರಾಷ್ಟ್ರದ ಹಸಿರು ಕ್ರಾಂತಿ, ಶ್ವೇತ ಕ್ರಾಂತಿಗೆ ನಾಂದಿ ಹಾಡಿತು. ರಾಷ್ಟ್ರದ ಅರ್ಥ ವ್ಯವಸ್ಥೆಗೆ ಹೊಸ ರೂಪ ನೀಡಲು ಮುಂದಾಯಿತು. ನೆಹರೂ ಅವರ ಬದ್ಧತೆಯಿಂದ ಅವರ ಆಶಯಗಳು ಚಳುವಳಿಯ ಮೂಲಕ ಸಾಕಾರಗೊಂಡವು.

7 ದಿನಗಳು 210 ಸ್ಥಳಗಳು 3 ಲಕ್ಷ ಸಹಕಾರಿಗಳು

ನವೆಂಬರ್ ದಿನಾಂಕ: 14, ಪಂಡಿತ್ ನೆಹರೂ ಅವರ ಹುಟ್ಟು ಹಬ್ಬ. ನೆಹರೂ ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗಾಗಿ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸೂಚಿಸುವ ಹಿನ್ನೆಲೆಯಲ್ಲಿ ಕಳೆದ 67 ವರ್ಷಗಳಿಂದ ಅವರ ಜನ್ಮ ದಿನದಿಂದ ಆರಂಭವಾಗಿ 7 ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯನ್ನು ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ.


📌 ಪ್ರಮುಖ ಅಂಕಿ ಅಂಶಗಳು:
210 ಸ್ಥಳಗಳು — ರಾಜ್ಯಾದ್ಯಂತ ಸಹಕಾರ ಸಪ್ತಾಹ ಆಚರಣೆ
3 ಲಕ್ಷಕ್ಕೂ ಹೆಚ್ಚು — ಸಹಕಾರಿಗಳು ಭಾಗವಹಿಸುವಿಕೆ

ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಪ್ರತಿ ವರ್ಷ ಅಂದಾಜು 210 ಸ್ಥಳಗಳಲ್ಲಿ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಸುಮಾರು 3 ಲಕ್ಷಕ್ಕೂ ಹೆಚ್ಚು ಸಹಕಾರಿಗಳು ಭಾಗವಹಿಸುತ್ತಿದ್ದಾರೆ.

67 ವರ್ಷಗಳ ಸಹಕಾರ ಸಪ್ತಾಹ ಆಚರಣೆ — ನೆಹರೂ ಅವರ ಕನಸುಗಳಿಗೆ ಸಾಕಾರ, ಸಹಕಾರಿ ಭಾರತದ ನಿರ್ಮಾಣ.