ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಸಹಕಾರ ರತ್ನ

Sahakara Ratna

ಪ್ರತಿಷ್ಠಿತ ಪ್ರಶಸ್ತಿ

ಸಹಕಾರಿಗಳಿಗೆ ಗೌರವ,
ಸಹಕಾರಕ್ಕೆ ಮನ್ನಣೆ

ನಮ್ಮ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಹಕಾರಿಗಳನ್ನು ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರದ ವತಿಯಿಂದ ಸಹಕಾರ ಸಪ್ತಾಹದ ಸಂದರ್ಭದಲ್ಲಿ ಸಹಕಾರಿಗಳಿಗೆ "ಸಹಕಾರ ರತ್ನ" ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು 50ನೇ ಅಖಿಲ ಭಾರತ ಸಹಕಾರ ಸಪ್ತಾಹ – 2003 ನೇ ಸಾಲಿನಿಂದ ಪ್ರಾರಂಭಿಸಲಾಗಿದೆ.

5 ಜನರಿಗೆ ಪ್ರಶಸ್ತಿ 15g ಚಿನ್ನದ ಪದಕ 2003 ಆರಂಭ

"ಸಹಕಾರ ರತ್ನ" ಪ್ರಶಸ್ತಿಯನ್ನು ರಾಜ್ಯದ 4 ಕಂದಾಯ ವಿಭಾಗಗಳಿಗೆ ತಲಾ ಒಬ್ಬರಂತೆ 4 ಜನರಿಗೆ ಹಾಗೂ ಬೆಂಗಳೂರು ನಗರಕ್ಕೆ ಒಬ್ಬರು ಸೇರಿ ಒಟ್ಟು 5 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸಹಕಾರ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ನಿವೃತ್ತರಾದ ಹಿರಿಯ ಅಧಿಕಾರಿಯೊಬ್ಬರನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.


2020-2021ನೇ ಸಾಲಿನಿಂದ ಅನ್ವಯ:
15 ಗ್ರಾಂ (22 ಕ್ಯಾರೆಟ್) ಚಿನ್ನದ ಪದಕ ಪರಿಷ್ಕೃತ

ಆದೇಶ ಸಂಖ್ಯೆ: ಸಇ/05/ಸಿಎಂಎಂ/2010
ದಿನಾಂಕ: 18.10.2010 — ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.

ಆಯ್ಕೆ ಪ್ರಕ್ರಿಯೆ: ಜಿಲ್ಲಾಮಟ್ಟದ ಆಯ್ಕೆ ಸಮಿತಿಯಿಂದ ಶಿಫಾರಸ್ಸಾಗಿ ಬಂದ ಸಹಕಾರಿಗಳ ವ್ಯಕ್ತಿ ಪರಿಚಯವನ್ನು ರಾಜ್ಯಮಟ್ಟದ ಆಯ್ಕೆ ಸಮಿತಿ ಪರಿಶೀಲಿಸಿ, ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಹಕಾರಿಗಳನ್ನು ಗುರುತಿಸಿ, ಪ್ರತಿ ವರ್ಷ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ.