Honorable Chief Minister | Government of Karnataka
Shri G T DeveGowda
Honorable MLA and President
ಸಹಕಾರ ಚಳುವಳಿಯ ಬೆಳವಣಿಗೆಗಾಗಿ ಅಗತ್ಯವಾದ ಶಿಕ್ಷಣ, ತರಬೇತಿ ನೀಡುವುದು ಹಾಗೂ ಸಹಕಾರ ಚಟುವಟಿಕೆಗಳಿಗೆ ವ್ಯಾಪಕ ಪ್ರಚಾರ ನೀಡುವುದು ಮಹಾಮಂಡಳದ ಪ್ರಮುಖ ಉದ್ದೇಶವಾಗಿದೆ.
ಸಹಕಾರ ಶಿಕ್ಷಣದಡಿಯಲ್ಲಿ ಸದಸ್ಯಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಕ್ರಮವು ಪರಿಣಾಮಕಾರಿ ಮಾರ್ಗದರ್ಶನದೊಂದಿಗೆ 1957ರಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿತು. ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ, ಸದಸ್ಯರುಗಳಿಗೆ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳಿಗೆ ಶಿಕ್ಷಣ ನೀಡುವುದು.
ಮಹಾಮಂಡಳವು ಸಹಕಾರ ಕ್ಷೇತ್ರದ ಸಿಬ್ಬಂದಿಗಳ ತರಬೇತಿಗಾಗಿ 8 ತರಬೇತಿ ಸಂಸ್ಥೆಗಳನ್ನು ಹೊಂದಿದ್ದು, 24 ವಾರಗಳ ಡಿಪ್ಲೋಮಾ ತರಬೇತಿಯನ್ನು ನೀಡಲಾಗುತ್ತಿದೆ. ಇದೇ ತರಬೇತಿಯನ್ನು ದೂರಶಿಕ್ಷಣ ವಿಧಾನದಲ್ಲೂ ನೀಡಲಾಗುತ್ತಿದೆ.
ಕಳೆದ 57 ವರ್ಷಗಳಿಂದ ಸಹಕಾರ ವಾರಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪತ್ರಿಕೆಯ ಪ್ರತಿಗಳು 13,000 ಸಹಕಾರ ಸಂಸ್ಥೆಗಳಿಗೆ ತಲುಪುತ್ತಿದ್ದು, 2 ಲಕ್ಷ ಜನರು ಓದುವ ನಿರೀಕ್ಷೆಯಿದೆ.
ಸಾರ್ವಜನಿಕರಲ್ಲಿ ಸಹಕಾರ ತತ್ವ ಮತ್ತು ಆಚರಣೆಯ ಬಗ್ಗೆ ಸಹಕಾರ ಚಳವಳಿಯ ಆರೋಗ್ಯಕರ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವುದು.
ಸೂಚನೆ: ಮಹಾಮಂಡಳವು ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣ, ತರಬೇತಿ, ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.