ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ವ್ಯವಸ್ಥಾಪಕ ನಿರ್ದೇಶಕರು

Managing Director Photo

ಕೆ.ಎಸ್. ನವೀನ್

K.S. Naveen

ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು
Karnataka State Cooperative Federation Ltd., Bengaluru

ಕೆ.ಸಿ.ಎಸ್. ಅಧಿಕಾರಿಯಾದ ಶ್ರೀ ಕೆ.ಎಸ್. ನವೀನ್ ಅವರು 1997 ರಲ್ಲಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದರು. ಪ್ರಥಮವಾಗಿ ಮಂಡ್ಯ ಜಿಲ್ಲೆಯ ಉಪವಿಭಾಗದಲ್ಲಿ ಸಹಾಯಕ ನಿಬಂಧಕರಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರು ನಗರದಲ್ಲಿಯೂ ಸಹ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸಿ ಇಲಾಖೆಯ ಆಡಳಿತ ಹಾಗೂ ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಅನುಭವವನ್ನು ಸಂಪಾದಿಸಿದರು.

ಕೆ.ಎಸ್. ನವೀನ್ ಅವರು ಉಪನಿಬಂಧಕರಾಗಿ ಬಡ್ತಿ ಪಡೆದ ನಂತರ ಬೆಂಗಳೂರು ತೋಟದ ಬೆಳೆಗಾರರ ಸಹಕಾರ ಸಂಘ (ಹಾಪ್‌ಕಾಮ್ಸ್) ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಕಾರ್ಯದರ್ಶಿಯಾಗಿ, ಚಿಕ್ಕಮಗಳೂರು ಜಿಲ್ಲೆಯ ಉಪನಿಬಂಧಕರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿಬಂಧಕರಾಗಿ ಹಾಗೂ ಮಾನ್ಯ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ನಿಬಂಧಕರ ಪತ್ರಾಂಕಿತ ಸಹಾಯಕರಾಗಿ ವಿವಿಧ ಜವಾಬ್ದಾರಿಯುತ ಹುದ್ದೆಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದರು.

ಕೆ.ಎಸ್. ನವೀನ್ ಅವರು ಮಾನ್ಯ ಸಹಕಾರ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಅತ್ಯಂತ ಜವಾಬ್ದಾರಿಯುತ ಸೇವೆ ಸಲ್ಲಿಸಿದರು. ನಂತರ ಜಂಟಿ ನಿಬಂಧಕರಾಗಿ ಬಡ್ತಿ ಪಡೆದು ಚಿತ್ರಕಲಾ ಪರಿಷತ್‌ನ ಮುಖ್ಯ ಆಡಳಿತಾಧಿಕಾರಿಯಾಗಿ, ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಕಾನೂನು ಕೋಶದ ಜಂಟಿ ನಿಬಂಧಕರಾಗಿ ಹಾಗೂ ಆಡಳಿತ ವಿಭಾಗದ ಜಂಟಿ ನಿಬಂಧಕರಾಗಿ ಸೇವೆ ಸಲ್ಲಿಸಿದರು. ತದನಂತರ ಅಪರ ನಿಬಂಧಕರಾಗಿ ಬಡ್ತಿ ಹೊಂದಿ ಗ್ರಾಹಕ ಮತ್ತು ಮಾರಾಟ ವಿಭಾಗದ ಅಪರ ನಿಬಂಧಕರಾಗಿ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ, ಸಹಕಾರ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಸಹಕಾರ ಚುನಾವಣಾ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ರಾಜ್ಯದ ಸಹಕಾರ ಸಂಘಗಳ ಮಾತೃ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಂಸ್ಥೆಯ ಅಭಿವೃದ್ಧಿ ಹಾಗೂ ಕಾರ್ಯಚಟುವಟಿಕೆಗಳ ರೂವಾರಿಯಾಗಿ ದಕ್ಷ, ಸಮರ್ಥ ಮತ್ತು ದೂರದೃಷ್ಟಿಯ ಆಡಳಿತವನ್ನು ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕರ ವಿವರ (PDF)