Honorable Chief Minister | Government of Karnataka
Shri G T DeveGowda
Honorable MLA and President
ಕರ್ನಾಟಕ ರಾಜ್ಯದ ಸಹಕಾರ ಸಂಘಗಳ ಮಾತೃ ಸಂಸ್ಥೆ ಎನಿಸಿಕೊಂಡಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯ ಉದ್ದೇಶದೊಂದಿಗೆ ಸಹಕಾರ ಶಿಕ್ಷಣ, ತರಬೇತಿ, ಪ್ರಚಾರ ಮತ್ತು ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿದೆ.
ನಾಡಿನ ಸಮಗ್ರ ಜನಸಮೂಹದಲ್ಲಿ ಸಹಕಾರ ತತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಹಕಾರ ಸಂಘ ಸಂಸ್ಥೆಗಳನ್ನು ರಚಿಸಲು ಮಾರ್ಗದರ್ಶನ ಮಾಡುವ ಆಶಯವನ್ನು ಇರಿಸಿಕೊಂಡಿದೆ.
ಸಹಕಾರ ತರಬೇತಿ, ಶಿಕ್ಷಣ, ಪ್ರಚಾರ, ಸಂಶೋಧನೆ ಮತ್ತು ಪ್ರಕಟಣೆಯ ಮೂಲಕ ಸಹಕಾರ ಚಳುವಳಿಗೆ ಪ್ರೋತ್ಸಾಹ ನೀಡುವುದು. ಸಹಕಾರ ಸಂಘ ಸಂಸ್ಥೆಗಳನ್ನು ಸುಲಲಿತವಾಗಿ, ಕಾನೂನು ಬದ್ಧವಾಗಿ ನಡೆಸಿಕೊಂಡು ಹೋಗಲು ತಿಳುವಳಿಕೆ ನೀಡುವ ದೃಷ್ಟಿ ಹಾಗೂ ಗುರಿಯನ್ನು ಹೊಂದಿದೆ.